ಅಜ್ಜಿ ರಾಕ್ - ಯುವಕರು ಶಾಕ್: ತಮಟೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿದ 80ರ ವೃದ್ಧೆ - 80 years old grandmother dance
🎬 Watch Now: Feature Video

ಚಾಮರಾಜನಗರ: 40 ವರ್ಷ ಆಯಿತೆಂದರೆ ಕಾಲು, ಸೊಂಟ ನೋವು ಎಂದು ಪೇಚಾಡಿಕೊಳ್ಳುವವರ ನಡುವೆ 80 ವರ್ಷದ ವೃದ್ಧೆಯೊಬ್ವರು ತಮಟೆ ಸದ್ದಿಗೆ ಡ್ಯಾನ್ಸ್ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಲ್ಲಿ ನಡೆದಿದೆ. ಬೇಗೂರಿನಲ್ಲಿ ನಿನ್ನೆ ಶ್ರೀ ಭಗೀರಥ ಭಾವಚಿತ್ರ ಮೆರವಣಿಗೆ ವೇಳೆ ಬಾರಿಸುತ್ತಿದ್ದ ತಮಟೆ ಸದ್ದಿಗೆ ವೃದ್ಧೆ ಮೋಳೆ ಚಿನ್ನಮ್ಮ ಎಂಬವರು ಭರ್ಜರಿ ಸ್ಟೆಪ್ ಹಾಕಿ ಯುವಕರು ಹುಬ್ಬೇರಿಸುವಂತೆ ಮಾಡಿದ್ದಾರೆ.