ಕೆಸರುಗದ್ದೆ ಮಧ್ಯೆ ಕೆಸರಿನೋಕುಳಿ.. ಸಾಹಸಮಯ ಆಟಗಳಲ್ಲಿ ಮಿಂದೆದ್ದ ಸ್ಪರ್ಧಿಗಳು - Kesaru Gadde Games
🎬 Watch Now: Feature Video
ಕೊಡಗು : ಮಡಿಕೇರಿ ಸಮೀಪದ ಕಗ್ಗೋಡು ಬೋಪಯ್ಯ ಎಂಬವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ 30ನೇ ವರ್ಷದ ರಾಜ್ಯಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು, ಯುವಕ ಯುವತಿಯರು, ಪುರುಷರು ಸೇರಿದಂತೆ ಮಹಿಳೆಯರೂ ಕೆಸರಿನಲ್ಲಿ ಸಾಹಸಮಯ ಆಟಗಳನ್ನು ಆಡಿರುವ ವಿಡಿಯೋ ಝಲಕ್ ಇಲ್ಲಿದೆ. ಕಳೆದ 3 ವರ್ಷಗಳಿಂದ ಕೊರೊನಾ ಕಾರಣದಿಂದ ಬ್ರೇಕ್ ಬಿದ್ದಿದ್ದ ಕೆಸರುಗದ್ದೆ ಆಟಕ್ಕೆ ಈ ಬಾರಿ ಮಡಿಕೇರಿ, ಸುಳ್ಯ, ಸಂಪಾಜೆ, ಕೋಡ್ಲಿಪೇಟೆ, ಸೋಮವಾರಪೇಟೆ, ಕೂಡಿಗೆ ಸೇರಿದಂತೆ ವಿವಿಧ ಭಾಗಗಳಿಂದ 40ಕ್ಕೂ ಹೆಚ್ಚು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಇನ್ನಷ್ಟು ಕಳೆ ನೀಡಿತ್ತು. ಮಕ್ಕಳಿಗೆ ಕೆಸರಿನಾಟವಾದರೆ, ಹಗ್ಗಜಗ್ಗಾಟ, ತ್ರೋಬಾಲ್, ವಾಲಿಬಾಲ್ ಆಟಗಳೊಂದಿಗೆ ಕಸರಿನಲ್ಲಿ ಸೆಣಸಾಡುತ್ತಿದ್ದ ಆಟಗಾರರ ಉತ್ಸಾಹ ನೋಡುಗರಿಗೆ ಭರಪೂರ ಮನೋರಂಜನೆ ನೀಡಿದರೆ ಆಟಗಾರರಿಗೆ ಮಳೆಗಾಲದ ಚಳಿಯಲ್ಲಿಯೂ ಬೆವರಿಳಿಯುವಂತೆ ಮಾಡಿತ್ತು.