ಧಾರವಾಡದಲ್ಲಿ ಲಾರಿ ಹರಿದು ಬಾಲಕಿ ಸಾವು.. ಜನರಿಂದ ಆಕ್ರೋಶ - ಮಿನಿ ಲಾರಿ ಹರಿದು ಬಾಲಕಿ ಸಾವು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15278653-thumbnail-3x2-news.jpg)
ಧಾರವಾಡ: ಮಿನಿ ಲಾರಿ ಹರಿದು ಬಾಲಕಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಗರದ ಕಲ್ಯಾಣನಗರ ರಸ್ತೆಯಲ್ಲಿ ಶುಕ್ರವಾರ ಸಂಭವಿಸಿದೆ. ಅನಂ ಧಾರವಾಡ ಟೈವಾಕ್ ಕಾಲೋನಿ ರಿಜ್ವಾನ್ ಐನಾಪೂರ (3) ಮೃತಳಾದ ಬಾಲಕಿ. ಪೋಷಕರ ಜೊತೆ ಬೇರೆ ಊರಿಗೆ ಹೋಗಲು ಬಸ್ ನಿಲ್ದಾಣದ ಬಳಿ ನಿಂತಿದ್ದ ವೇಳೆ ಬಾಲಕಿ ಮೇಲೆ ಮಿನಿ ಲಾರಿ ಹಾದು ಹೋಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ಆಕ್ರೋಶಗೊಂಡ ಜನರು ಲಾರಿ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದರು.