VIDEO: ಅಡಕೆ ತೋಟದಲ್ಲಿ ಅಡಗಿದ್ದ 13 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ - ಚಿಕ್ಕಮಗಳೂರು ಬೃಹತ್ ಹೆಬ್ಬಾವು ಸೆರೆ
🎬 Watch Now: Feature Video
ಚಿಕ್ಕಮಗಳೂರು: ಹುಲ್ಲಿನ ನಡುವೆ ಬೆಚ್ಚಗೆ ಮಲಗಿದ್ದ ಬೃಹತ್ ಹೆಬ್ಬಾವನ್ನು ಜಿಲ್ಲೆಯ ಕೊಪ್ಪ ತಾಲೂಕಿನ ಕತ್ತಲಗಿರಿ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ. ದರ್ಶನ್ ಮೂರ್ತಿ ಎಂಬುವರ ಅಡಕೆ ತೋಟದಲ್ಲಿ ಬರೋಬ್ಬರಿ 13 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಕಂಡುಬಂದಿದೆ. ತೋಟದ ಮಾಲೀಕರು ಉರಗ ತಜ್ಞ ಹರಿಂದ್ರಗೆ ವಿಚಾರ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಹರಿಂದ್ರ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ಬಳಿಕ ಅದನ್ನು ಕೊಪ್ಪ ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ತಾಲೂಕಿನ ಹೊರವಲಯದ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.