ಸಿಲಿಕಾನ್ ಸಿಟಿಯಲ್ಲಿ ಖಾಕಿಗಳ ಸಖತ್ ಸ್ಟೆಪ್ಸ್... ವಿಡಿಯೋ - Zumba Dance Training for Police Staff
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6140261-thumbnail-3x2-hrs.jpg)
ಪೋಲಿಸ್ ಕೆಲಸ ಎಂದ್ರೇನೇ ಹಾಗೆ, ಬಿಡುವು ಅನ್ನೋದೆ ಇರಲ್ಲ. ಸಮ್ಮೇಳನ, ಸಮಾರಂಭ, ಪ್ರತಿಭಟನೆ ಹೀಗೆ ಎಲ್ಲ ಕಡೆ ಖಾಕಿ ಹಾಕೊಂಡು ಭದ್ರತೆ ನೀಡುತ್ತ ಪೊಲೀಸ್ ಸಿಬ್ಬಂದಿ ಬಸವಳಿದು ಹೋಗಿರ್ತಾರೆ. ಹೀಗಾಗಿ, ಪೋಲೀಸರ ಸುಸ್ತು ಹೋಗಲಾಡಿಸಿ, ಮನಸ್ಸಿಗೂ, ಮಸ್ತಕಕ್ಕೂ ರಿಲ್ಯಾಕ್ಸ್ ನೀಡಲು, ಸಿಲಿಕಾನ್ ಸಿಟಿಯ ಈಶಾನ್ಯ ವಿಭಾಗ ಪೊಲೀಸರಿಂದ ಜುಂಬಾ ಡ್ಯಾನ್ಸ್ ಮಾಡಿಸಲಾಗ್ತಿದೆ. ಖಾಕಿಗಳ ಜುಂಬಾ ಡ್ಯಾನ್ಸ್ ತರಬೇತಿಗೆ ನಟ ಪುನೀತ್ ರಾಜ್ ಕುಮಾರ್ ಚಾಲನೆ ನೀಡಿದ್ರು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಈಶಾನ್ಯ ವಿಭಾಗ ಡಿಸಿಸಿ ಭೀಮಾ ಶಂಕರ್ ಗುಳೇದ್ ಉಪಸ್ಥಿತರಿದ್ದರು. ಈಶಾನ್ಯ ವಿಭಾಗದಲ್ಲಿ ಒಟ್ಟು 900 ಪೊಲೀಸ್ ಸಿಬ್ಬಂದಿಗಳಿದ್ದು, 300 ಜನರಂತೆ 3 ಶಿಫ್ಟ್ಗಳಲ್ಲಿ ಜುಂಬಾ ತರಬೇತಿ ನೀಡಲಾಗ್ತಿದೆ.