ಕಲಾವಿದನ ಕೈಯಲ್ಲಿ ಅರಳಿದ ಯುವರತ್ನ:ಡಸ್ಟ್ ಆರ್ಟ್ ಮೂಲಕ ಚಿತ್ರಕ್ಕೆ ಸ್ವಾಗತ - dust art,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11238582-thumbnail-3x2-vish.jpg)
ಧಾರವಾಡ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರ ಇಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿದೆ. ಈ ಹಿನ್ನೆಲೆ ನಗರದ ಕಲಾವಿದನೊಬ್ಬ ವಿನೂತನವಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಕೆಲಗೇರಿಯ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ತಮ್ಮ ಓಮ್ನಿ ವಾಹನದ ಮೇಲೆ ಡಸ್ಟ್ ಆರ್ಟ್ ಬಿಡಿಸುವ ಮೂಲಕ ಚಿತ್ರಕ್ಕೆ ಶುಭ ಕೋರಿದ್ದಾರೆ. ವಾಹನದ ಮೇಲೆ ಧೂಳು ಹಾಕಿ ಅದರ ಮೇಲೆ ಪುನೀತ್ ರಾಜಕುಮಾರ್ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಚಿತ್ರ ಬಿಡಿಸಿd್ದಲ್ಲದೆ, ಯುವರತ್ನ ಟೈಟಲ್ ಕೂಡ ಬರೆದಿದ್ದಾರೆ. ಯುವರತ್ನ ಸಿನಿಮಾ ಕೆಸಿಡಿ, ಕೆಯುಡಿ ಸೇರಿದಂತೆ ಧಾರವಾಡದ ವಿವಿಧೆಡೆ ಚಿತ್ರೀಕರಣಗೊಂಡಿರುವುದು ವಿಶೇಷವಾಗಿದೆ.