ತುಂಬಿ ಹರಿಯುವ ನದಿಯಲ್ಲಿ ಯುವಕರಿಬ್ಬರ ಹುಚ್ಚು ಸಾಹಸ: ವಿಡಿಯೋ - etv bharat
🎬 Watch Now: Feature Video
ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಪಡನೂರು ಗ್ರಾಮದ ಬಳಿಯ ರೈಲ್ವೇ ಸೇತುವೆಯಿಂದ ನದಿಗೆ ಹಾರಿ ಯುವಕರಿಬ್ಬರು ಹುಚ್ಚು ಸಾಹಸ ಮೆರೆದಿದ್ದಾರೆ. ಮಹಾರಾಷ್ಟ್ರ ಸೊಲ್ಲಾಪುರ ಜಿಲ್ಲೆ ತಡವಾಳ ಗ್ರಾಮದ ಯುವಕರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾನದಿಗೆ 30 ಅಡಿ ಎತ್ತರದ ರೇಲ್ವೇ ಸೇತುವೆಯಿಂದ ಹಾರಿದ್ದಾರೆ. ನಂತರ ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ. ಯುವಕರು ನದಿಗೆ ಹಾರುವ ಎದೆ ಝಲ್ಲೆನಿಸುವ ದೃಶ್ಯವನ್ನು ಜೊತೆಗಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.