ಕೆರೆಯಲ್ಲಿ ಮುಳುಗುತ್ತಿದ್ದ ಯುವಕನ ಪ್ರಾಣ ರಕ್ಷಿಸಿದ ಶಾಸಕ, ಮಾಜಿ ಸಂಸದ - ಶಾಸಕ ಸುರೇಶ್ ಗೌಡ, ಮಾಜಿ ಸಂಸದ ಶಿವರಾಮೇಗೌಡ

🎬 Watch Now: Feature Video

thumbnail

By

Published : Nov 10, 2019, 8:44 PM IST

ಯುವಕನ ಹುಚ್ಚಾಟಕ್ಕೆ ಶಾಸಕ, ಮಾಜಿ ಸಂಸದರು ಬೆಸ್ತುಬಿದ್ದ ಘಟನೆ ನಾಗಮಂಗಲ ತಾಲ್ಲೂಕಿನ ಬಿಂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುಮಾರು 20 ವರ್ಷಗಳ ನಂತರ ಬಿಂಡೇನಹಳ್ಳಿ ಕೆರೆ ತುಂಬಿದೆ. ಕೆರೆ ತುಂಬಿದ ಸಂತೋಷಕ್ಕೆ ಜನತೆ ದೇವರ ಪೂಜೆ ನಡೆಸಿ ತೆಪ್ಪೋತ್ಸವ ನಡೆಸುತ್ತಿದ್ದರು. ಬೆಂಗಳೂರಿನಿಂದ ಈ ತೆಪ್ಪೋತ್ಸವಕ್ಕೆ ಆಗಮಿಸಿದ್ದ ಅಭಿ ಎಂಬ ಯುವಕ ಈಜಲು ಕೆರೆಗೆ ಇಳಿದು ಈಜು ಬಾರದೆ ನೀರಿನಲ್ಲಿ ಮುಳುಗುತ್ತಿದ್ದ. ಈ ಸಂದರ್ಭದಲ್ಲಿ ಕಾಪಾಡಿ, ಕಾಪಾಡಿ ಎಂದು ಕೂಗುತ್ತಿದ್ದಂತೆ ತೆಪ್ಪೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ಸುರೇಶ್ ಗೌಡ, ಮಾಜಿ ಸಂಸದ ಶಿವರಾಮೇಗೌಡರು ಹಾಗೂ ಸ್ಥಳದಲ್ಲೇ ಇದ್ದ ಜನತೆ ತೆಪ್ಪವನ್ನು ವಾಪಸ್ ಕರೆಸಿ ಯುವಕನ ರಕ್ಷಣೆ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.