ರಾಯಚೂರು: ಕಾಲು ಜಾರಿ ಬಾವಿಗೆ ಬಿದ್ದು ಯುವಕ ಸಾವು - man died in raichur
🎬 Watch Now: Feature Video
ಕಾಲು ಜಾರಿ ಬಾವಿಯಲ್ಲಿ ಬಿದ್ದು ಯುವಕ ಸ್ವಾನ್ನಪಿರುವ ಘಟನೆ ರಾಯಚೂರು ತಾಲೂಕಿನ ಯರಗುಂಟ ಗ್ರಾಮದಲ್ಲಿ ಸಂಭವಿಸಿದೆ. ತಿಮ್ಮಪ್ಪ(೧೮) ಮೃತ ಯುವಕನೆಂದು ಗುರುತಿಸಲಾಗಿದೆ. ವಡ್ಡೆಪಲ್ಲಿ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾವಿಯೊಂದನ್ನು ಕಂಡು ನೀರು ಕುಡಿಯಲೆಂದು ಹೋಗಿದ್ದಾನೆ. ಆ ಸಂದರ್ಭ ಕಾಲು ಜಾರಿ ಬಾವಿಯಲ್ಲಿ ಬಿದ್ದು, ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಮೃತ ಯುವಕ ಬುದ್ದಿಮಾಂದ್ಯ ಎಂದು ಹೇಳಲಾಗುತ್ತಿದೆ.