ಯೋಗ ಜಗದ್ಗುರು ವಚನಾನಂದ ಸ್ವಾಮೀಜಿಯಿಂದ ಯೋಗ ಸಪ್ತಾಹಕ್ಕೆ ಚಾಲನೆ
🎬 Watch Now: Feature Video
ಬಾಗಲಕೋಟೆ: ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಯೋಗ ಜಗದ್ಗುರು ವಚನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು. ಒಂದು ವಾರ ಕಾಲ ನಡೆಯುವ ಈ ಯೋಗ ಶಿಬಿರವು ನಿತ್ಯ ಬೆಳಗ್ಗೆ 5-30ರಿಂದ 7-30ರವರೆಗೆ ನಡೆಯಲಿದೆ. ಶಾಸಕ ವೀರಣ್ಣ ಚರಂತಿಮಠ ಸೇರಿ ವಿವಿಧ ಮಠಾಧೀಶರು ಸಹ ಇಂದು ನಡೆದ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಯೋಗದ ವಿವಿಧ ಆಸನಗಳು ಹಾಗೂ ಪರಿಣಾಮಗಳ ಬಗ್ಗೆ ವಚನಾನಂದ ಸ್ವಾಮೀಜಿ ಮಾಹಿತಿ ನೀಡಿದರು.