thumbnail

By

Published : Jul 9, 2020, 8:46 AM IST

ETV Bharat / Videos

ಶಿವಮೊಗ್ಗದಲ್ಲಿ17 ಕೊರೊನಾ ಪಾಸಿಟಿವ್​ ಕೇಸ್​ ಪತ್ತೆ: ಪ್ರತ್ಯಕ್ಷ ವರದಿ

ಶಿವಮೊಗ್ಗದಲ್ಲಿ ನಿನ್ನೆ 17 ಕೊರೊನಾ ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ. ಸೋಂಕಿತರ ಅರ್ಧದಷ್ಟು ಜನರು ಗುಣಮುಖರಾಗಿ ಮನೆಗೆ ವಾಪಸ್ ಆಗುತ್ತಿರುವುದು ಸಮಾಧಾನ ತಂದಿದೆ. ನಿನ್ನೆ ನಾಲ್ವರು ಗುಣಮುಖರಾಗಿ ವಾಪಸ್ ಆಗಿದ್ದಾರೆ. ಇದುವರೆಗೂ 141 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಲ್ಲಿ 190 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 6 ಮಂದಿ ಸಾವನಪ್ಪಿದ್ದು, 70 ಕಂಟೇನ್ಮೆಂಟ್ ಝೋನ್​ಗಳನ್ನು ಮಾಡಲಾಗಿದೆ. ನಿನ್ನೆ ಪತ್ತೆಯಾದ ಪ್ರಕರಣದಲ್ಲಿ ಶಿವಮೊಗ್ಗದ 9 ಜನರು, ಹೊಸನಗರದ 3, ಸೊರಬದ 3 ಹಾಗೂ ಸಾಗರದ ಓರ್ವರಿಗೆ ಸೋಂಕು ದೃಢಪಟ್ಟಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.