ETV Bharat / technology

ಇನ್ಮುಂದೆ ಹೊರ ದೇಶಗಳಿಂದಲೂ ಯುಪಿಐ ಪೇಮೆಂಟ್​ ಮಾಡಬಹುದೆಂದ ಪೇಟಿಎಂ - ಆದ್ರೆ, ಕಂಡಿಷನ್ಸ್​ ಅಪ್ಲೈ - INTERNATIONAL UPI PAYMENTS

Paytm Goes International UPI Payments: ಇನ್ಮುಂದೆ ಡಿಜಿಟಿಲ್ ಪಾವತಿ ಪ್ಲಾಟ್​ಫಾರ್ಮ್​ ಪೇಟಿಎಂನಿಂದ ನೀವು ವಿದೇಶದಿಂದ ಯುಪಿಐ ಪಾವತಿಗಳನ್ನು ಮಾಡಬಹುದು. ಈ ಬಗ್ಗೆ ಕಂಪನಿ ಮಾಹಿತಿ ನೀಡಿದೆ.

PAYTM GOES INTERNATIONAL  UPI PAYMENTS  INTERNATIONAL UPI PAYMENTS  PAYTM
ಪೇಟಿಎಂ (IANS)
author img

By ETV Bharat Tech Team

Published : Nov 20, 2024, 8:23 AM IST

Paytm Goes International UPI Payments: ಜನಪ್ರಿಯ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳಲ್ಲೊಂದಾದ ಪೇಟಿಎಂ ಬಳಕೆದಾರರು ಈಗ ಭಾರತದ ಹೊರಗಿನ ಆಯ್ದ ಸ್ಥಳಗಳಿಂದ ಯುಪಿಐ ಪಾವತಿಗಳನ್ನು ಮಾಡಬಹುದು ಎಂದು One97 ಕಮ್ಯುನಿಕೇಷನ್ಸ್ ಲಿಮಿಟೆಡ್ ಘೋಷಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಸಿಂಗಾಪುರ್, ಫ್ರಾನ್ಸ್, ಮಾರಿಷಸ್, ಭೂತಾನ್ ಮತ್ತು ನೇಪಾಳಕ್ಕೆ ಹೋಗುವ ಭಾರತೀಯ ಪ್ರಯಾಣಿಕರು ಪೇಟಿಎಂ ಮೂಲಕ ಶಾಪಿಂಗ್, ಊಟ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಹಣ ಪಾವತಿಸಲು ಸಾಧ್ಯವಾಗುತ್ತದೆ ಎಂದು ಪೇಟಿಎಂ ಹೇಳಿದೆ. ಈ ಕಾರ್ಯವನ್ನು ಸಕ್ರಿಯಗೊಳಿಸುವುದಕ್ಕೆ ಬಳಕೆದಾರರ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಲು "ಒನ್​-ಟೈಂ ಆ್ಯಕ್ಟಿವೇಶನ್​" ಮಾಡುವ ಅಗತ್ಯವಿದೆ. ನೀವು ಅಂತಾರಾಷ್ಟ್ರೀಯ ಯುಪಿಐ ಪಾವತಿಗಳನ್ನು ಸೆಟ್​ ಮಾಡಲು ಮರೆತಿದ್ದರೆ, ಈ ಫೀಚರ್​ ಅನ್ನು ಆ್ಯಕ್ಟಿವೇಶನ್​ ಮಾಡಲು ಆ್ಯಪ್​ ಆಟೋಮೆಟಿಕ್​ ಆಗಿ ಬಳಕೆದಾರರನ್ನು ಪ್ರೇರೇಪಿಸುತ್ತದೆ.

ಅಷ್ಟೇ ಅಲ್ಲ, ಈ ಫೀಚರ್​ ಅನ್ನು ಮ್ಯಾನುವಲ್​ ಆಗಿ ಆ್ಯಕ್ಟಿವೆಟ್​ ಮಾಡಲು ಇಚ್ಛಿಸಿದ್ರೆ, ಸರ್ಚ್​ ವಿಭಾಗಕ್ಕೆ ಹೋಗಿ ‘International UPI’ ಎಂದು ಟೈಪ್​ ಮಾಡಿ. ಆಗ ಸರ್ವೀಸ್​ ಟ್ಯಾಬ್​ ಮೇಲೆ ಕ್ಲಿಕ್​ ಮಾಡಿ. ಕಾಣಿಸುವ ಸ್ಕ್ರೀನ್​ ಮೇಲೆ, ಭಾರತದ ಹೊರಗೆ ಪಾವತಿಗಳನ್ನು ಮಾಡಲು ನಿಮ್ಮ ಯಪಿಐ ಐಡಿಯನ್ನು ಕನೆಕ್ಟ್​ ಮಾಡಿ ಎಂದು ಪೇಟಿಎಂ ನಿಮಗೆ ಸೂಚಿಸುತ್ತದೆ.

ಈ ಪೇಟಿಎಂ ಪಾವತಿಗಳು ಪ್ರಯಾಣದ ಅವಧಿಯನ್ನು ಅವಲಂಬಿಸಿರುತ್ತದೆ. ಅಂದರೆ, ಪೇಟಿಎಂ ಬಳಕೆದಾರರು ಒಂದರಿಂದ 90 ದಿನಗಳವರೆಗೆ ಬಳಕೆಯ ಅವಧಿಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಭದ್ರತಾ ಉದ್ದೇಶಗಳಿಗಾಗಿ ಈ ಸೇವೆಯನ್ನು ಬಂದ್​ ಮಾಡಲಾಗುತ್ತದೆ. ನಿಗದಿತ ಸಮಯದ ನಂತರ ಆಟೋಮೆಟಿಕ್​ ಆಗಿ ಈ ಸೇವೆಯನ್ನು ಬಂದ್​ ಆಗುವುದರಿಂದ ನಿಮ್ಮ ವಹಿವಾಟುಗಳ ಸ್ಟಾಪ್​ ಆಗುತ್ತವೆ. ಇದರಿಂದ ಸ್ಕ್ಯಾಮ್​ ಮಾಡುವವರಿಂದ ತಮ್ಮ ಹಣವನ್ನು ತಡೆಯಬಹುದಾಗಿದೆ ಎಂದು ಕಂಪನಿ ಹೇಳುತ್ತದೆ.

ಇತ್ತೀಚೆಗೆ ಪೇಟಿಎಂ ಹೊಸ ಫೀಚರ್​ ರಿವೀಲ್​ ಮಾಡಿದೆ. ಅದು ಬಳಕೆದಾರರಿಗೆ ವಿವರವಾದ ವಹಿವಾಟು ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಇದು ಬಳಕೆದಾರರು ತಮ್ಮ ಖರ್ಚುಗಳನ್ನು ಟ್ರ್ಯಾಕ್ ಮಾಡಲು ಮತ್ತು ಬಜೆಟ್‌ಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ವರ್ಷದ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅನುಸರಣೆಯಿಲ್ಲದ ಕಾರಣದಿಂದ ತಾಜಾ ಠೇವಣಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುವಂತೆ ಪೇಟಿಎಂನ ಬ್ಯಾಂಕಿಂಗ್ ವಿಭಾಗವನ್ನು ಆದೇಶಿಸಿತು.

ಇದನ್ನೂ ಓದಿ: ಎಐ ಬಗ್ಗೆ ನೋಡುತ್ತಿರುವುದೆಲ್ಲವೂ ಸತ್ಯವಲ್ಲ; ಎಐ ಫೌಂಡೇಷನ್‌ ಮಾಡೆಲ್‌ ಸೃಷ್ಟಿಸಲು ಭಾರತ ಸಶಕ್ತ: ಮನೀಶ್ ಗುಪ್ತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.