ಲಾಕ್ಡೌನ್ ಸಂಕಷ್ಟ: ಯಕ್ಷಗಾನ ಕಲಾವಿದರಿಗೆ ಆರ್ಥಿಕ ನೆರವು ಘೋಷಿಸಲು ಆಗ್ರಹ - ಗಂಡುಕಲೆ ಯಕ್ಷಗಾನ
🎬 Watch Now: Feature Video
ಮಂಗಳೂರು: ಕೊರೊನಾ ಲಾಕ್ಡೌನ್ ಬಳಿಕ ಎಲ್ಲಾ ರಂಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರಾವಳಿಯ ಗಂಡುಕಲೆ ಯಕ್ಷಗಾನ ಕಲಾವಿದರಿಗೂ ಈ ಸಂಕಷ್ಟ ಹೊರತಾಗಿಲ್ಲ. ಲಾಕ್ಡೌನ್ ಬಳಿಕ ಯಕ್ಷಗಾನ ಪ್ರದರ್ಶನ ಸಂಪೂರ್ಣ ನಿಂತು ಹೋಗಿದೆ. ಯಕ್ಷಗಾನದಿಂದಲೇ ಜೀವನ ಸಾಗಿಸುತ್ತಿದ್ದ ಇಂತಹ ನೂರಾರು ಯಕ್ಷಗಾನ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರವು ಘೋಷಿಸಿದ ಆರ್ಥಿಕ ಪ್ಯಾಕೇಜಿನಲ್ಲೂ ಯಕ್ಷಗಾನ ಕಲಾವಿದರಿಗೆ ಯಾವುದೇ ನೆರವು ಸಿಕ್ಕಿಲ್ಲ. ಸರಕಾರ ಬಡ ಯಕ್ಷಗಾನ ಕಲಾವಿದರನ್ನು ಗುರುತಿಸಿ ಅವರಿಗೂ ಆರ್ಥಿಕ ಪರಿಹಾರವನ್ನು ಘೋಷಿಸಬೇಕೆಂದು ಯಕ್ಷಗಾನ ಕಲಾವಿದರು ಆಗ್ರಹ ಮಾಡುತ್ತಿದ್ದಾರೆ.