ಯಾದಗಿರಿಯಲ್ಲಿ ಪ್ರವಾಹ: ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿದ ಜಿಲ್ಲಾಡಳಿತ

🎬 Watch Now: Feature Video

thumbnail
ಭೀಮಾ ನದಿ ಪ್ರವಾಹಕ್ಕೆ ಯಾದಗಿರಿ ಜಿಲ್ಲೆಯ ಜನ ತತ್ತರಿಸಿ ಹೊಗಿದ್ದಾರೆ. ಅನೇಕ ಗ್ರಾಮಗಳಿಗೆ ನುಗ್ಗಿದ ನದಿ ಹಿನ್ನೀರಿನಿಂದ ಜನರು ಮನೆಗಳನ್ನು ಬಿಟ್ಟು ಬೀದಿಗೆ ಬಿದ್ದಿದ್ದಾರೆ. ಸೊನ್ನಾ ಬ್ಯಾರೇಜ್‌ನಿಂದ 3 ಲಕ್ಷ 50 ಸಾವಿರಕ್ಕೂ ಅಧಿಕ ಕ್ಯೂಸೆಕ್‌ ನೀರು ಭೀಮಾ ನದಿಗೆ ಹರಿ ಬಿಡಲಾಗಿದೆ. ಪರಿಣಾಮ, ಭೀಮಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನದಿ ಪಾತ್ರರದ ನಿವಾಸಿಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಾಕಷ್ಟು ಜನರು ಈ ಪ್ರವಾಹಕ್ಕೆ ಮನೆ ಕಳೆದುಕೊಂಡರೆ ಸಾವಿರಾರು ಎಕರೆಯಲ್ಲಿ ರೈತರು ಬಿತ್ತಿದ ಬೆಳೆ ಸಂಪೂರ್ಣ ನೀರಿಗೆ ಆಹುತಿಯಾಗಿದೆ. ಇನ್ನು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ 45 ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಆದೇಶಿಸಿದ್ದು, ಈಗಾಗಲೇ ಅಧಿಕಾರಿಗಳು ಶಹಪುರ ತಾಲೂಕಿನ 2 ಗ್ರಾಮಗಳು ಹಾಗೂ ವಡಗೇರಾ ತಾಲೂಕಿನ 8 ಗ್ರಾಮದ ಜನರನ್ನು ಕಾಳಜಿ ಕೇಂದ್ರಗಳಿಗೆ ಶಿಫ್ಟ್‌ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.