ಯುವ ದಸರಾಕ್ಕೆ ಚಾಲನೆ ನೀಡಿದ ವಿಶ್ವ ಬಾಡ್ಮಿಂಟನ್ ತಾರೆ ಪಿ.ವಿ.ಸಿಂಧು - ಮೊದಲ ಬಾರಿ ಮೈಸೂರಿಗೆ ಭೇಟಿ ನೀಡಿದ ಪಿ.ವಿ. ಸಿಂಧೂ
🎬 Watch Now: Feature Video
ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವ ದಸರಾವನ್ನು ಬಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಉದ್ಘಾಟನೆ ಮಾಡಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ದಸರಾ ಮಹೋತ್ಸವ ಅಂಗವಾಗಿ ಯುವ ಜನರನ್ನು ಆಕರ್ಷಿಸುವ ಯುವ ದಸರವನ್ನು ಸಿಎಂ ಯಡಿಯೂರಪ್ಪ ಜೊತೆ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಸಿಂಧು ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವುದು ಸಂತೋಷ ತಂದಿದೆ. ಮೈಸೂರು ಸುಂದರ ಸ್ವಚ್ಛ ನಗರಿಯಾಗಿದೆ ಎಂದ್ರು. ಹಾಗೂ ಪಿ.ವಿ.ಸಿಂಧೂ ಇಲ್ಲಿನ ಜನರಿಗೆ ದಸರಾ ಶುಭಾಶಯ ತಿಳಿಸಿದರು. ನಂತರ ಕರ್ನಾಟಕ ಸರ್ಕಾರದ ವತಿಯಿಂದ 10 ಲಕ್ಷ ರೂಪಾಯಿ ಚೆಕ್ ನೀಡಿದ ಸಿಎಂ ಯಡಿಯೂರಪ್ಪ ಸಿಂಧೂ ಹಾಗೂ ಅವರ ತಂದೆ- ತಾಯಿಗೆ ಯುವ ದಸರಾ ವೇದಿಕೆಯಲ್ಲಿ ಸನ್ಮಾನ ಮಾಡಿದರು.