ಕೊರೊನಾ ಬಿಸಿ: ಕಾಮಣ್ಣನಿಗೆ ಮಾಸ್ಕ್ ಹಾಕಿ ದಹನ, ಅರಿಶಿಣದಿಂದ ಹೋಳಿ ಆಡಿದ ಮಹಿಳೆಯರು! - Dharwad holi Festival speacial
🎬 Watch Now: Feature Video
ಧಾರವಾಡ: ಹೋಳಿ ಹಬ್ಬಕ್ಕೆ ಕೊರೊನಾ ಬಿಸಿ ತಟ್ಟಿದ್ದು, ಕಾಮಣ್ಣನ ಮೂರ್ತಿಗೆ ಕೆಲವೆಡೆ ಮಾಸ್ಕ್ ಹಾಕಿ ಪ್ರತಿಷ್ಠಾಪನೆ ಮಾಡಿ ಇಂದು ಬೆಳಿಗ್ಗೆ ದಹಿಸಲಾಯಿತು. ಕಾಮ ದಹನ ಮಾಡಿದ ಬಳಿಕ ಬಣ್ಣದ ಬದಲಿಗೆ ಅರಿಶಿಣದಿಂದ ಯುವತಿಯರು ಹೋಳಿ ಆಡಿದರು. ವಿಶ್ವದಾದ್ಯಂತ ಕೊರೊನಾ ಭೀತಿ ಹಿನ್ನೆಲೆ ರಾಸಾಯನಿಕ ಬಣ್ಣದಿಂದ ದೂರ ಉಳಿದಿರುವ ಮಹಿಳೆಯರು, ಅರಿಶಿಣದಿಂದ ಹೋಳಿ ಆಟ ಆಡಿದ್ದಾರೆ. ಕೆಲವೆಡೆ ಯುವಕರು ಸಹ ಸಂಭ್ರಮದಿಂದ ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಹಬ್ಬ ಆಚರಿಸಿದರು.