ಕಣ್ಣೀರಿಟ್ಟು ಕೋಡಿಹಳ್ಳಿ ಚಂದ್ರಶೇಖರ್ ಬಳಿ ಮನವಿ ಮಾಡಿದ ಮಹಿಳಾ ಸಿಬ್ಬಂದಿ - 6th Pay Commission issued
🎬 Watch Now: Feature Video
ಸಾರಿಗೆ ನೌಕರರ ಪ್ರತಿಭಟನೆ ಇಂದೂ ಕೂಡ ಮುಂದುವರೆದಿದ್ದು, ಮಹಿಳಾ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ತಮ್ಮೊಂದಿಗೆ ಸಹಕರಿಸುವಂತೆ ಕೋಡಿಹಳ್ಳಿ ಚಂದ್ರಶೇಖರ್ ಅವರಲ್ಲಿ ಕಣ್ಣೀರಿಡುತ್ತಾ ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ. 6ನೇ ವೇತನ ಆಯೋಗ ಜಾರಿ ಮಾಡುವವರೆಗೂ ಹೋರಾಟ ಮಾಡಲಾಗುವುದು. ಮಾಡದೇ ಹೋದರೆ ಪ್ರಾಣ ಬಿಡುತ್ತೇವೆ ಹೊರತು ಹೋರಾಟ ಬಿಡುವುದಿಲ್ಲ ಎಂದು ಮಹಿಳಾ ನೌಕರರು ಪಟ್ಟುಹಿಡಿದಿದ್ದಾರೆ.