ಚಿರತೆ ಬಳಿಕ ಕಾಡಾನೆ ಎಂಟ್ರಿ... ದಾಳಿಗೆ ತುಮಕೂರಿಗರು ತತ್ತರ! - ತುಮಕೂರಲ್ಲಿ ಚಿರತೆ ದಾಳಿ
🎬 Watch Now: Feature Video
ತುಮಕೂರು ಜಿಲ್ಲೆಯ ಗುಬ್ಬಿ, ತುಮಕೂರು, ಕುಣಿಗಲ್ ತಾಲೂಕಿನ ಗಡಿಭಾಗದಲ್ಲಿ ಚಿರತೆ ಹಾವಳಿಯಿಂದ ತತ್ತರಿಸಿ ಹೋಗಿದ್ದ ಜನರಿಗೆ ಇದೀಗ ಕಾಡಾನೆ ದಾಳಿ ಭೀತಿ ಹುಟ್ಟಿಸಿದೆ. ತುಮಕೂರು ತಾಲೂಕಿನ ಕೋಳಿಹಳ್ಳಿ ಬಳಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದೆ. ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಜಾನುವಾರು ಮೇಲೆಯೂ ಸಹ ದಾಳಿ ಮಾಡಿದ್ದು, ಹಸು ಗಂಭೀರವಾಗಿ ಗಾಯಗೊಂಡಿದೆ. ತುಮಕೂರು ತಾಲೂಕಿನ ಹಿರೇಹಳ್ಳಿ, ಕೋಳಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಇಂದು ದಿನವಿಡಿ ಸಂಚರಿಸಿದ ಕಾಡಾನೆ ಮನಸೋ ಇಚ್ಛೆ ದಾಂಧಲೆ ಮಾಡಿದೆ. ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಚಿರತೆ ಸೆರೆ ಹಿಡಿಯಲು ಸಾಕಾನೆಗಳನ್ನು ಕರೆ ತರಲಾಗಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಇನ್ನೊಂದು ಇಂದು ಕಾಡಾನೆ ದಾಂಧಲೆ ನಡೆಸಿರುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.