ಸಸ್ಯ ಸಂಪತ್ತು ಹೆಚ್ಚಿಸಲು ಬೆಟ್ಟಗುಡ್ಡದಲ್ಲಿ ಬಿತ್ತನೆ ಮಾಡಿದ ನೆರಳು ಸಂಘಟನೆ ಯುವಕರು - ತುಮಕೂರಿನ ಮಾರನ ಕಣಿವೆ ಶಿಖರ
🎬 Watch Now: Feature Video
ತುಮಕೂರು ಜಿಲ್ಲೆಯ ಅರೆ ಮಲೆನಾಡು ಪ್ರದೇಶ ಎಂದೇ ಗುರುತಿಸಲ್ಪಟ್ಟಿರುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಬೆಟ್ಟಗುಡ್ಡಗಳು ಹಸಿರಿನಿಂದ ನಳನಳಿಸುತ್ತಿವೆ. ಈ ಗಿರಿ ಶಿಖರಗಳ ಹಸಿರ ಸಿರಿಯನ್ನು ಕಣ್ತುಂಬಿಕೊಳ್ಳಲು ಬರುತ್ತಿರೋ ಪ್ರವಾಸಿಗರ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ಮದಲಿಂಗನ ಕಣಿವೆ ಗಿರಿ ಶಿಖರಗಳಲ್ಲಿ ಎತ್ತ ನೋಡಿದರೂ ಹಸಿರಿನದ್ದೇ ಸಂಭ್ರಮ. ಭವಿಷ್ಯದ ಸಮೃದ್ಧ ಸಸ್ಯ ಸಂಪತ್ತಿನ ಬೆಳವಣಿಗೆಗೆ ನೆರಳು ಸಂಘಟನೆ ನೇತೃತ್ವದ ಯುವಕರು ಕಾಡುಮರಗಳ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದಾರೆ. ಮಹಾಗನಿ, ತೇಗ, ಕಾಡು ಬಾದಾಮಿ , ಮತ್ತಿ, ರಕ್ತಚಂದನ, ಶ್ರೀಗಂಧ, ನೇರಳೆ, ಬುಗರಿ ಬೀಜಗಳನ್ನು ಚಾರಣ ಮಾಡುವ ಸಂದರ್ಭದಲ್ಲಿ ನೇರವಾಗಿ ಗುಡ್ಡದೆಲ್ಲೆಡೆ ಬಿತ್ತುತ್ತಿದ್ದಾರೆ.
Last Updated : Aug 10, 2020, 9:28 AM IST