ಪಶ್ಚಿಮಘಟ್ಟಗಳು ಉಗ್ರರ ತಾಣವಾಗುತ್ತಿವೆ: ಶಾಸಕ ಬೋಪಯ್ಯ ಆತಂಕ
🎬 Watch Now: Feature Video
ಕೊಡಗು ಜಿಲ್ಲೆಯಲ್ಲಿ ಉಗ್ರ ಚಟುವಟಿಕೆಗಳು ಸಕ್ರಿಯವಾಗಿದ್ದು, ದಕ್ಷಿಣ ಭಾರತವನ್ನು ಕೇಂದ್ರೀಕರಿಸಿ ಉಗ್ರರು ಪಶ್ಚಿಮಘಟ್ಟಗಳಲ್ಲಿ ತಂಗುತ್ತಿದ್ದಾರೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಜಿಲ್ಲೆಯಲ್ಲಿ ಈ ಹಿಂದೆಯೇ ಇದರ ಬಗ್ಗೆ ಸುಳಿವಿತ್ತು. ದಕ್ಷಿಣ ಭಾರತದ ಹಲವೆಡೆ ದಾಳಿ ನಡೆಸುವ ಸಂಚು ರೂಪಿಸಿದ್ದರು. ಆದರೆ ಈಗ ಎನ್ಐಎ ಅದನ್ನು ಸ್ಪಷ್ಟಪಡಿಸಿದೆ. ಹಿಂದೆಯೂ ಅಬ್ದುಲ್ ಮದನಿ ಎಂಬ ಉಗ್ರ ಕೊಡಗಿನ ಹೊಸ ತೋಟದಲ್ಲಿ ನೆಲೆಸಿದ್ದ. ಇದೆಲ್ಲ ಪಶ್ಚಿಮಘಟ್ಟಗಳು ಉಗ್ರರ ತಾಣವಾಗುತ್ತಿವೆ ಎನ್ನೋದಕ್ಕೆ ಉದಾಹರಣೆಯಾಗಿದೆ. ಎನ್ಐಎ ಕೂಡಲೇ ಕಾರ್ಯಪ್ರವೃತ್ತವಾಗಿ ಕ್ರಮ ಕೈಗೊಳ್ಳಬೇಕು. ಪ್ರವಾಸಿಗರ ರೂಪದಲ್ಲಿ ಜಿಲ್ಲೆಗೆ ಯಾರೆಲ್ಲಾ ಬರುತ್ತಿದ್ದಾರೆ ಹಾಗೂ ಚೆಕ್ ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಅಗತ್ಯವಿದೆ ಎಂದು ಕೆ.ಜಿ.ಬೋಪಯ್ಯ ಹೇಳಿದ್ದಾರೆ.