ಹಂಪಿ ಉತ್ಸವಕ್ಕೆ ತಯಾರಿ... ಕಮಲಾಪುರದಲ್ಲಿ ಪ್ರವಾಸಿಗರಿಗಾಗಿ ಜಲ ಸಾಹಸ ಕ್ರೀಡೆಗಳು - watergames oganised for hampi uthsav visitors

🎬 Watch Now: Feature Video

thumbnail

By

Published : Dec 30, 2019, 8:25 PM IST

ಈ ಬಾರಿ ಹಂಪಿ ಉತ್ಸವಕ್ಕೆ ಆಗಮಿಸುವ ಪ್ರವಾಸಿಗರನ್ನು ಜಲಕ್ರೀಡೆಗಳು ಆಕರ್ಷಿಸಲಿವೆ. ಹೊಸಪೇಟೆಯ ಕಮಲಾಪುರ ಕೆರೆಯಲ್ಲಿ ಉತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ಕೆರೆಯಲ್ಲಿದ್ದ ಹೂಳನ್ನು ತೆಗೆಯಲಾಗಿದೆ. ಹೊಸಪೇಟೆಗೆ ಬರುವ ಪ್ರಯಾಣಿಕರನ್ನು ಆಕರ್ಷಣೆ ಮಾಡುವಂತೆ ಬೀದಿ ದೀಪಗಳನ್ನು ಅಳವಡಿಸಿದ್ದಾರೆ. ಕೆರೆಯ ಪಕ್ಕದಲ್ಲಿ ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ವಿಶ್ರಾಂತಿ ಪಡೆಯಲು ಸಿಮೆಂಟಿನ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಹಂಪಿ ಉತ್ಸವಕ್ಕೆ ಬರುವ ಪ್ರವಾಸಿಗರಿಗಾಗಿ ಕೆರೆಯಲ್ಲಿ ನಾಲ್ಕು ಚಿಕ್ಕ ಬೋಟುಗಳ ಏರ್ಪಾಡು ಮಾಡಲಾಗಿದೆ. ರೇಸ್ ಬೈಕ್ ಬೋಟ್​​ ಮತ್ತು ಸಾಮಾನ್ಯ ಬೋಟುಗಳಿವೆ. ಇದಕ್ಕೆ ಹೋಗಬೇಕೆಂದರೆ ಒಬ್ಬರಿಗೆ 200 ರೂ. ಶುಲ್ಕ ನಿಗದಿ ಮಾಡಲಾಗಿದೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.