ಸೊನ್ನಾ ಬ್ಯಾರೇಜ್ನಿಂದ ಭೀಮಾ ನದಿಗೆ ನೀರು ಬಿಡುಗಡೆ: ನದಿ ತೀರದ ಜನರು ಹೈರಾಣ
🎬 Watch Now: Feature Video
ಯಾದಗಿರಿ: ಸೊನ್ನಾ ಬ್ಯಾರೇಜ್ನಿಂದ ಭೀಮಾ ನದಿಗೆ 5 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹೊರಬಿಡಲಾಗಿದ್ದು, ಭೀಮಾ ನದಿಯ ರುದ್ರನರ್ತನಕ್ಕೆ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಶಹಪುರ ತಾಲೂಕಿನ ತಂಗಡಗಿ ಗ್ರಾಮಕ್ಕೆ ಈ ನದಿಯ ಹಿನ್ನೀರು ನುಗ್ಗಿದ ಪರಿಣಾಮ ನದಿ ತೀರದಲ್ಲಿದ್ದ ವಿಶ್ವರಾಧ್ಯ ಮಠ ಸಂಪೂರ್ಣ ಜಲಾವೃತಗೊಂಡಿದೆ. ಇಂದು ಅಮವಾಸ್ಯೆಯಾಗಿದ್ದರಿಂದ ಮಠಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು, ನೀರು ನುಗ್ಗಿದ್ದರಿಂದ ಭಕ್ತರಿಗೆ ಮಠಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು, ಬ್ಯಾರೇಜ್ನಿಂದ ನೀರು ಬಿಡುವ ಮುನ್ನ ಅಧಿಕಾರಿಗಳು ಯಾವುದೇ ಸೂಚನೆ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಈಟಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.