ವಿಜಯಪುರದಲ್ಲಿ ನಿರುಪಯುಕ್ತ ಕೊಳವೆ ಬಾವಿಯಿಂದ ಕಾರಂಜಿಯಂತೆ ಚಿಮ್ಮಿದ ನೀರು! - ವಿಜಯಪುರದಲ್ಲಿ ಕೊಳವೆ ಬಾವಿಯಿಂದ ಕಾರಂಜಿಯಂತೆ ಚಿಮ್ಮಿದ ನೀರು
🎬 Watch Now: Feature Video
ವಿಜಯಪುರ: ಹಲವು ತಿಂಗಳ ಹಿಂದೆ ಕೊರೆಸಲಾಗಿದ್ದ ಬೋರ್ವೆಲ್ನಿಂದ ಇದ್ದಕ್ಕಿದ್ದಂತೆ ನೀರು ಚಿಮ್ಮಿರುವ ವಿಸ್ಮಯಕಾರಿ ಘಟನೆ ದೇವರಹಿಪ್ಪರಗಿ ತಾಲೂಕಿನ ಗಂಗನಹಳ್ಳಿಯಲ್ಲಿ ನಡೆದಿದೆ. ಸ್ಥಗಿತಗೊಂಡ ಬೋರ್ವೆಲ್‌ನಿಂದ ಆಕಾಶದೆತ್ತರಕ್ಕೆ ನೀರು ಚಿಮ್ಮುತ್ತಿರುವುದು ಜನರನ್ನು ಚಕಿತಗೊಳಿಸಿದೆ. ಗಂಗನಹಳ್ಳಿಯ ಮಾಳಿಂಗರಾಯ ದೊಡಮನಿ ಎಂಬುವವರ ಜಮೀನಿನಲ್ಲಿ ಬೋರ್‌ವೆಲ್‌ನಿಂದ ಯಾವುದೇ ಯಂತ್ರದ ಶಕ್ತಿ ಇಲ್ಲದೆ ನೀರು ತನ್ನಷ್ಟಕ್ಕೆ ತಾನೇ ಆಗಸದೆತ್ತರಕ್ಕೆ ಚಿಮ್ಮಿದೆ. ಇದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Last Updated : Oct 20, 2019, 3:11 PM IST