ಡಿಕೆಶಿ ಹಾಗೂ ಸಂಸದ ಸುರೇಶ್ ಮನೆ ಮೇಲೆ ಸಿಬಿಐ ದಾಳಿ: ವಾಕ್ ಥ್ರೂ ಮೂಲಕ ಮಾಹಿತಿ - ಬೆಂಗಳೂರು ಸಿಸಿಬಿ ದಾಳಿ ಸುದ್ದಿ
🎬 Watch Now: Feature Video
ಬೆಂಗಳೂರು: ಡಿಕೆಶಿ ನಿವಾಸ ಹಾಗೂ ಸಂಸದ ಸುರೇಶ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದ್ದು, ಶೋಧ ಕಾರ್ಯ ಮುಂದುವರೆದಿದೆ. ಸದ್ಯ ಡಿಕೆಶಿ ಮನೆಯ ಬಳಿ ಮಹತ್ತರ ಬೆಳವಣಿಗೆ ನಡೆಯುತ್ತಿದ್ದು, ಕಾಂಗ್ರೆಸ್ನ ಕೆಲ ನಾಯಕರು ಜಮಾವಣೆಗೊಂಡಿದ್ದಾರೆ. ಇನ್ನು ಸಿಬಿಐ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸಿಬಿಐ ಅಧಿಕಾರಿಗಳು ಇದಕ್ಕೆ ಯಾವುದಕ್ಕೂ ಕ್ಯಾರೆ ಎನ್ನದೆ ಶೋಧ ಮುಂದುವರೆಸಿದ್ದಾರೆ. ಸಿಬಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸ್ಥಳೀಯ ಪೊಲೀಸರು ಭಧ್ರತೆ ಒದಗಿಸಿದ್ದಾರೆ. ಈ ಬಗ್ಗೆ ವಾಕ್ ಥ್ರೂ ಮೂಲಕ ಈಟಿವಿ ಭಾರತದ ಪ್ರತಿನಿಧಿ ಮಾಹಿತಿ ನೀಡಿದ್ದಾರೆ.