ಸಿಬಿಐ ವಿಚಾರಣೆ ಎದುರಿಸಿ ಹೊರ ಬಂದ ಕುಲಕರ್ಣಿ ಆಪ್ತ ಸಹಾಯಕ ಶ್ರೀ ಪಾಟೀಲ್ - ಯೋಗೇಶ್ ಗೌಡ ಕೊಲೆ ಪ್ರಕರಣ,
🎬 Watch Now: Feature Video
ಧಾರವಾಡ: ಯೋಗೇಶ್ ಗೌಡ ಕೊಲೆ ಪ್ರಕರಣ ಕುರಿತಂತೆ ವಿನಯ ಕುಲಕರ್ಣಿ ಆಪ್ತ ಸಹಾಯಕ ಶ್ರೀ ಪಾಟೀಲ್ ಹಾಗೂ ಬಿಲ್ಡರ್ ರೂಪೆನ್ ಸಿಬಿಐ ವಿಚಾರಣೆ ಎದುರಿಸಿ ಹೊರ ಬಂದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುದೀರ್ಘ ವಿಚಾರಣೆಯ ಬಳಿಕ ರೂಪೆನ್ ಹಾಗೂ ಶ್ರೀಪಾಟೀಲ್ನಿಂದ ಸಿಬಿಐ ಅಧಿಕಾರಿಗಳು ಕೊಲೆ ಪ್ರಕರಣದ ಕುರಿತು ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ಜನರನ್ನು ಕರೆಯಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆಯಿದ್ದು, ಯಾರ‍್ಯಾರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.