ರಂಭಾಪುರಿ ಶ್ರೀಗಳ ಪಾದಪೂಜೆ ಮಾಡಿದ ವಿನಯ್ ಗುರೂಜಿ! - ವಿನಯ್ ಗುರೂಜಿ
🎬 Watch Now: Feature Video
ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿರುವ ವಿನಯ್ ಗುರೂಜಿ, ರಂಭಾಪುರಿ ಶ್ರೀಗಳ ಪಾದ ಪೂಜೆ ಮಾಡಿ,ಪುಷ್ಪಾರ್ಚನೆ ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕಾಶಿಗೆ ತೆರಳಿದ್ದ ವಿನಯ್ ಗುರೂಜಿ , ಅಲ್ಲಿಂದ ತಂದ ಶ್ರೀ ಚಕ್ರವನ್ನು ರಂಭಾಪುರಿ ಶ್ರೀಗಳಿಗೆ ನೀಡಿದ್ದಾರೆ. ಈ ಶ್ರೀ ಚಕ್ರವನ್ನು ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾನದಲ್ಲಿ ಇಡುವಂತೆ ಸಲಹೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಬಾಳೆಹೊನ್ನೂರಿನಲ್ಲಿ 61 ಅಡಿ ಎತ್ತರದ ರೇಣುಕಾಚಾರ್ಯ ಮೂರ್ತಿ ನಿರ್ಮಾಣವಾಗಲಿದೆ. ಈ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ವಿನಯ್ ಗುರೂಜಿ ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿ, ಜಗದ್ಗುರು ಶ್ರೀ ರಂಭಾಪುರಿ ಶ್ರೀಗಳಿಗೆ ಪಾದಪೂಜೆ ಮಾಡಿ ಪುಷ್ಪಾರ್ಚನೆ ಮಾಡಿದ್ದಾರೆ.