ಎಬಿವಿಪಿಯಿಂದ ವಿಜಯಪುರದಲ್ಲಿ ಬೃಹತ್ ತಿರಂಗ ರ್‍ಯಾಲಿ.. ! - 400 meter national flag
🎬 Watch Now: Feature Video
ವಿಜಯಪುರ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದಲ್ಲಿ ಎಬಿವಿಪಿ ಕಾರ್ಯಕರ್ತರಿಂದ ತಿರಂಗಾ ರ್‍ಯಾಲಿ ನಡೆಯಿತು. 400 ಮೀಟರ್ ಉದ್ಧದ ರಾಷ್ಟ್ರ ಧ್ವಜ ಹಿಡಿದು ಮೆರವಣಿಗೆ ನಡೆಸಿದ ಕಾರ್ಯಕರ್ತರು, ನಗರದ ಶಿವಾಜಿ ಚೌಕ್ನಿಂದ ಪ್ರಾರಂಭಿಸಿ ಗಾಂಧಿವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಹಾದು ಸಿದ್ದೇಶ್ವರ ದೇವಾಲಯದ ವರೆಗೆ ತೆರಳಿದರು. ಮೆರವಣಿಗೆಯಲ್ಲಿ ವಿಜಯಪುರ ನಗರದ ಹಲವು ಕಾಲೇಜುಗಳ 3000 ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಧ್ವಜ ಹಿಡಿದು ಸಾಗಿದರು. ಮೆರವಣಿಗೆ ಉದ್ದಕ್ಕೂ ಭಾರತ ಮಾತಾಕಿ ಜೈ, ವಂದೇ ಮಾತರಂ, ಜೈ ಜವಾನ್ ಜೈ ಕಿಸಾನ್ ಘೋಷಣೆಗಳು ಮೊಳಗಿದವು.