ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೆರಗು ನೀಡಿದ ವಿಜಯ್ ಪ್ರಕಾಶ್ ಗಾಯನ - ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್
🎬 Watch Now: Feature Video

ಕಲಬುರಗಿ: ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಜರುಗಿದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನಲೆ ಗಾಯಕ ವಿಜಯ್ ಪ್ರಕಾಶ್ ತಮ್ಮ ಕಂಚಿನ ಕಂಠದಿಂದ ಪ್ರೇಕ್ಷಕರನ್ನು ರಂಜಿಸಿದರು. ಶಂಕರನಾಗ್ ಅಭಿನಯದ ಜೊತೆಯಲಿ ಜೊತೆ ಜೊತೆಯಲಿ ಹಾಡಿಗೆ ಖ್ಯಾತ ಗಾಯಕಿ ಅನುರಾಧ ಭಟ್ ಸಾಥ್ ನೀಡಿದರು. ಇನ್ನು ವಿಜಯ್ ಪ್ರಕಾಶ್ ಅವರ ಹಾಡುಗಳಿಗೆ ಯುವಕರು ಮತ್ತು ಯುವತಿಯರು ನಿಂತಲ್ಲೇ ಹೆಜ್ಜೆ ಹಾಕಿದರು.
Last Updated : Feb 8, 2020, 8:56 AM IST