ನಾಯಿಗಳನ್ನು ಸಚಿವರನ್ನಾಗಿ ಮಾಡಿದ್ದರೂ ಸಿಎಂ ಕಾಲಿಗೆ ಬೀಳುತ್ತಿರಲಿಲ್ಲ: ವಾಟಾಳ್ ನಾಗರಾಜ್ ಆಕ್ರೋಶ - ವಾಟಾಳ್ ನಾಗರಾಜ್ ಲೆಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5978258-thumbnail-3x2-hasa.jpg)
ಬೆಂಗಳೂರು: ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ವೇಳೆ ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪ ಕಾಲಿಗೆ ನಮಿಸಿದ್ದರು. ಇದರ ವಿರುದ್ಧ ಗುಡುಗಿರುವ ವಾಟಾಳ್ ನಾಗರಾಜ್ ನೂತನ ಸಚಿವರನ್ನು ನಾಯಿಗೆ ಹೋಲಿಸಿ ಕಿಡಿಕಾರಿದರು. ನಾಯಿಗಳನ್ನು ಸಚಿವರಾಗಿ ಮಾಡಿದ್ದರೂ ಆ ನಾಯಿಗಳು ಮುಖ್ಯಮಂತ್ರಿ ಕಾಲಿಗೆ ಬೀಳುತ್ತಿರಲಿಲ್ಲ, ಅವಕ್ಕೆ ಗೌರವ, ಶಕ್ತಿ ಇದೆ. ಜೊತೆಗೆ ಇವರೆಲ್ಲ ಸಂವಿಧಾನ ಹಾಗೂ ದೇವರ ಹೆಸರು ಬಿಟ್ಟು ಯಡಿಯೂರಪ್ಪ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿ ಎಂದು ವಾಟಾಳ್ ನಾಗರಾಜ್ ವ್ಯಂಗ್ಯವಾಡಿದರು.