ಇಲ್ಲಿವೆ ನೋಡಿ ಸ್ವಾಮಿ ಕೊಹಿನೂರು ವಜ್ರ ತಯಾರಿಕೆಯಿಂದ ಹಿಡಿದು ಎಲ್ಲಾ ಬಗೆಯ ಅದಿರುಗಳ ಪ್ರದರ್ಶನ...
🎬 Watch Now: Feature Video
ಬೆಂಗಳೂರು: ಭಾರತೀಯ ಭೂವೈಜ್ಞಾನಿಕ ಸರ್ವೇ ಇಲಾಖೆಯು ಕೃಷಿ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಮೇಳದಲ್ಲಿ ವಿವಿಧ ಬಗೆಯ ಕಲ್ಲುಗಳು, ಖನಿಜ, ಅದಿರು, ವಜ್ರಗಳನ್ನು ಪ್ರದರ್ಶಿಸಿ ಆಕರ್ಷಿಸಿದೆ. ಸ್ಟೇಟ್ ಯುನಿಟ್ ಆಫ್ ಕರ್ನಾಟಕ-ಗೋವಾ ಹಾಗೂ ಜಿಎಸ್ಐ ಕ್ಯುರೆಟೋರಿಯಲ್ ಡಿವಿಷನ್ ಕೋಲ್ಕತ್ತಾದ ಸಂಸ್ಥೆಯಿಂದ ಆಯೋಜಿಸಲಾಗಿತ್ತು. ಟಾಲ್ಕಂ ಪೌಡರ್ ತಯಾರಿಸುವ ಅದಿರು, ಸ್ಟೀಲ್ ತಯಾರಿಸುವ ಅದಿರು, ಕಾಗೆ ಬಂಗಾರದ ಅದಿರು, ಮಹಡಿಯ ಶೀಟ್ಗಳನ್ನು ತಯಾರಿಸುವ ಆಬ್ಸ್ಟೋಸ್ ಅದಿರು, ಕೊಹಿನೂರು ವಜ್ರದ ನಕಲು, ವಜ್ರದ ಚೂರುಗಳು ಸಿಗುವ ಕಿಂಬರ್ ಲೈಟ್ ಅದಿರು ಪ್ರದರ್ಶನಕ್ಕಿಡಲಾಗಿದೆ. ಅಷ್ಟೇ ಅಲ್ಲದೆ, ಪಳೆಯುಳಿಕೆಯ ರೂಪ ತಳೆದು ಕಲ್ಲಾಗಿರುವ ಡೈನೋಸರ್ ಮೊಟ್ಟೆ, ಬೇರೆ ಜಾತಿಯ ಆನೆಯ ಪಳೆಯುಳಿಕೆ, ಹವಳದ ಅದಿರು ಕೂಡ ಇಲ್ಲಿದೆ. ಈ ಕುರಿತು ವಾಕ್ ಥ್ರೂ ಮೂಲಕ ವಿವರಿಸಲಾಗಿದೆ.