ವಾಲ್ಮೀಕಿ ಜಯಂತಿ ಆಚರಣೆ: ತಮಟೆ, ಡಿಜೆ ಹಾಡಿಗೆ ಸಖತ್ತಾಗಿ ಕುಣಿದ ಮಹಿಳೆಯರು
🎬 Watch Now: Feature Video
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದ್ದು, ಸುಮಾರು 100 ಕ್ಕೂ ಅಧಿಕ ಟ್ರ್ಯಾಕ್ಟರ್ಗಳಲ್ಲಿ ವಾಲ್ಮೀಕಿಯ ಭಾವಚಿತ್ರವನ್ನು ನಗರದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ನಗರದ ಮುಖ್ಯರಸ್ತೆಯೂದ್ದಕ್ಕೂ ತಮಟೆ ವಾಧ್ಯಗಳು, ಡೊಳ್ಳು ಕುಣಿತ, ಛಧ್ಮವೇಶ ದಾರಿಗಳು ನಗರವಾಸಿಗಳನ್ನು ಆಕರ್ಷಿಸಿದವು. ದಾರಿಯೂದ್ದಕ್ಕೂ ತಮಟೆ, ಡಿಜೆ ಹಾಡುಗಳಿಗೆ ಯುವಜನತೆ ಕುಣಿದು ಕುಪ್ಪಳಿಸಿದರು. ಸಂಸದ ಬಚ್ಚೇಗೌಡರು ತಮ್ಮ ಬೆಂಬಲಿಗರಿಲ್ಲದೆ ಏಕಾಂಗಿಯಾಗಿ ಮೆರವಣಿಗೆ ವೀಕ್ಷಿಸಿ ದಾರಿಯೂದ್ದಕ್ಕೂ ಸ್ಪೆಲ್ಪಿಗಳಿಗೆ ಫೋಸ್ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.