ಮಾಸ್ಕ್ ಇಲ್ಲದೆ ರಸ್ತೆಗೆ ಬಂದ ಯುವಕನಿಗೆ ಪೊಲೀಸರಿಂದ 'ಊಟಾಬಸಿ' ಶಿಕ್ಷೆ!! - Second Sunday Lockdown
🎬 Watch Now: Feature Video

2ನೇ ಭಾನುವಾರದ ಲಾಕ್ಡೌನ್ನಲ್ಲಿ ಅನಾವಶ್ಯಕ ರಸ್ತೆಗೆ ಮಾಸ್ಕ್ ಧರಿಸದೆ ಬಂದ ಯುವಕನಿಗೆ ಪೊಲೀಸರು ಉಟಾಬಸಿ ಶಿಕ್ಷೆ ನೀಡಿದ್ದಾರೆ. ಗೋಪಾಲಗೌಡ ಬಡಾವಣೆಯ ಬಸ್ ನಿಲ್ದಾಣದ ಬಳಿ ಯುವಕನೊಬ್ಬ ಮಾಸ್ಕ್ ಇಲ್ಲದೆ ನಡೆದು ಬರುವಾಗ ಪೊಲೀಸರನ್ನು ಕಂಡು ಓಡಲು ಪ್ರಾರಂಭಿಸಿದ್ದ. ತಕ್ಷಣ ಯುವಕನನ್ನು ಹಿಡಿದ ಪೊಲೀಸರು ಮಾಸ್ಕ್ ಇಲ್ಲದೆ ಹೊರ ಬರಬಾರದು ಎಂದು ತಿಳಿದಿಲ್ಲವೇ ಎಂದು ಕೇಳಿ, ದಂಡ ಹಾಕುವ ಬದಲು 30 ಉಟಾಬಸಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಮತ್ತೆ ರಸ್ತೆಗೆ ಇಂದು ಬರದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದ್ದಾರೆ.