ಕೇಂದ್ರ ಬಜೆಟ್-2020 ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕ: ಮಹೇಂದ್ರ ಲದ್ದಡ - ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5921411-thumbnail-3x2-hbl.jpg)
ಹುಬ್ಬಳ್ಳಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್-2020-21 ಕೃಷಿ ಆಧಾರಿತ ಬಜೆಟ್ ಆಗಿದ್ದು, ಕೃಷಿಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ದೇಶದ ಆರ್ಥಿಕ ಅಭಿವೃದ್ಧಿ ಪೂರಕವಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ ತಿಳಿಸಿದ್ದಾರೆ. ಇದೊಂದು ಸಮಾನತೆ ಹಾಗೂ ಆರ್ಥಿಕ ಅಭಿವೃದ್ಧಿ ಜೊತೆಗೆ ದೇಶದ ಸುಸ್ಥಿರ ಅಭಿವೃದ್ಧಿಗೆ ಪೂರಕ ಬಜೆಟ್ ಆಗಿದೆ ಎಂದ ಅವರು ಕೃಷಿಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಕೃಷಿಯ ಜೊತೆಗೆ ಉತ್ಪಾದನೆ ಉದ್ಯೋಗ ಹಾಗೂ ಆರ್ಥಿಕ ಸಂಚಲನ ಸೃಷ್ಟಿಯಾಗಲು ಪೂರಕವಾದ ಬಜೆಟ್ ಎಂದು ಬಣ್ಣಿಸಿದರು.