ಕೊಂಡ ಹಾಯುವಾಗ ಮುಗ್ಗರಿಸಿ ಬಿದ್ದ ಇಬ್ಬರು..ಸಾಮಾಜಿಕ ಜಾಲತಾಣದಲ್ಲಿ ವಿಡಿಯೋದ್ದೇ ಸದ್ದು! - Video viral on social media
🎬 Watch Now: Feature Video

ಹುಬ್ಬಳ್ಳಿ: ಮೊಹರಂ ಹಬ್ಬದ ಆಚರಣೆ ವೇಳೆ ಕೊಂಡ ಹಾಯುವಾಗ ಪಾಂಜಾ ದೇವರು ಹೊತ್ತ ಇಬ್ಬರು ಬೆಂಕಿಯ ಕೊಂಡದಲ್ಲಿ ಮುಗ್ಗರಿಸಿ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗಿದೆ. ಪಾಂಜಾ ದೇವರನ್ನು ಹೊತ್ತುಕೊಂಡು ಕೊಂಡ ಹಾಯುವಾಗ ಮುಂದೆ ಹೋಗುವ ವ್ಯಕ್ತಿ ಬಿದ್ದ ಮೇಲೆ ಆತನ ಮೇಲೆ ಮತ್ತೊಬ್ಬ ಬಿದಿದ್ದಾನೆ. ಇಬ್ಬರು ಮುಗ್ಗರಿಸಿ ಬೀಳುತ್ತಿದಂತೆ ಅಲ್ಲೇ ಇದ್ದ ಸ್ಥಳೀಯರು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ, ಇದು ಯಾವ ಜಿಲ್ಲೆಯಲ್ಲಿ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಜನರು ಉತ್ತರ ಕರ್ನಾಟಕ ಭಾಗದ ಭಾಷೆ ಮಾತನಾಡುತ್ತಿರುವುದರಿಂದ ಧಾರವಾಡ, ಗದಗ, ಹಾವೇರಿ ಅಥವಾ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿರಬಹುದು ಎನ್ನಲಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.