20 ವರ್ಷಗಳ ನಂತರ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಉತ್ಸವ: ದೀಪಗಳಿಂದ ಅಲಂಕೃತಗೊಂಡ ರಸ್ತೆಗಳು - Roads Decorated with Lights
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6233178-thumbnail-3x2-ckm.jpg)
ಚಿಕ್ಕಮಗಳೂರು: ಕಳೆದ 20 ವರ್ಷಗಳ ನಂತರ ಜಿಲ್ಲಾ ಉತ್ಸವ ನಡೆಯುತ್ತಿದ್ದು, ಇಂದಿನಿಂದ ಮೂರು ದಿನಗಳ ಕಾಲ ಸಂಭ್ರಮ ಮೇಳೈಸಲಿದೆ. ಜಿಲ್ಲಾ ಉತ್ಸವ ನಡೆಯುತ್ತಿರುವ ಹಿನ್ನೆಲೆ ನಗರದ ಎಂ ಜಿ ರಸ್ತೆ ಹಾಗೂ ಐ ಜಿ ರಸ್ತೆಗಳನ್ನು ಸಂಪೂರ್ಣವಾಗಿ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಬಣ್ಣ ಬಣ್ಣದ ಛತ್ರಿ ಹಾಗೂ ದೀಪಗಳನ್ನು ಅಳವಡಿಕೆ ಮಾಡಲಾಗಿದೆ. ನಗರದ ರಸ್ತೆಯ ಇಕ್ಕೆಲಗಳಲ್ಲಿ ಉಪ ವೇದಿಕೆಗಳನ್ನು ಮಾಡಿದ್ದು ಈ ವೇದಿಕೆಯಲ್ಲಿ ಕಲಾವಿದರು ತಮ್ಮ ಕಲೆಯ ಪ್ರದರ್ಶನವನ್ನು ಸಹ ನೀಡಬಹುದಾಗಿದೆ. ಈಗಾಗಲೇ ಈ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದು, ಮಧ್ಯಾಹ್ನ ಮೂರು ಗಂಟೆಯ ನಂತರ ಈ ರಸ್ತೆಯಲ್ಲಿ ಜಿಲ್ಲಾ ಉತ್ಸವದ ಮೆರವಣಿಗೆ ಸಾಗಲಿದೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿದ walk through ಇಲ್ಲಿದೆ....