ಸಾಹೇಬ್ರಾ, ಈ ಊರ್ ಬಿಟ್ ಬಿಡ್ತೀವಿ, ಬೇರೆ ಕಡೆಗೆ ಇಡೀ ಊರನ್ನೇ ಶಿಫ್ಟ್ ಮಾಡಿಬಿಡ್ರೀ .. - Neighborhood-affected location inspection by MLA
🎬 Watch Now: Feature Video

ತುಂಗಭದ್ರಾ ಜಲಾಶಯದ ನೀರು ನುಗ್ಗಿದ ಪ್ರದೇಶಗಳಿಗೆ ಜಿಲ್ಲೆಯ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ್ ದಡೇಸಗೂರ್ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಂಗಾವತಿ ತಾಲೂಕಿನ ಹಳೇ ಆಯೋಧ್ಯೆ ಗ್ರಾಮಕ್ಕೆ ಶಾಸಕ ಬಸವರಾಜ ದಡೇಸೂಗೂರು ಭೇಟಿ ನೀಡಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು. ತುಂಗಭದ್ರಾ ನದಿ ನೀರು ಗ್ರಾಮಕ್ಕೆ ನುಗ್ಗುತ್ತಿರುವುದರಿಂದ ಗ್ರಾಮಸ್ಥರು ಇಂತಹ ಸಮಸ್ಯೆ ಪದೇಪದೆ ಅನುಭವಿಸುವಂತಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಹೀಗಾಗಿ, ನಮಗೆ ಈ ಗ್ರಾಮ ಬೇಡ. ಗ್ರಾಮವನ್ನು ಸ್ಥಳಾಂತರಿಸಿ ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.