ಎಲ್ಲೆಲ್ಲೂ ಹರ್ಷ ಮೂಡಿಸಿದ ತುಂಗಾರತಿ: ಕುಣಿದು ಕುಪ್ಪಳಿಸಿದ ಕಲಾ ತಂಡಗಳು - ತುಂಗಾರತಿ ಅದ್ಧೂರಿ ಹಬ್ಬ
🎬 Watch Now: Feature Video

ರೈತರ ಜೀವನಾಡಿಯಾದ ತುಂಗಭದ್ರಾ ನದಿತೀರದಲ್ಲಿ ಅದ್ಧೂರಿಯಾಗಿ ನಾಡಿನ ವಿವಿಧ ಮಠದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನೇರವೇರಿತು. ತಾಲೂಕಿನ ಕುಮಾರಪಟ್ಟಣ(ಕೋಡಿಯಾಲ) ಗ್ರಾಮದ ಪುಣ್ಯಕೋಟಿ ಮಠದ ಬಾಲಯೋಗಿ ಸ್ವಾಮೀಜಿ ನೇತೃತ್ವದಲ್ಲಿ ಈ ತುಂಗಾರತಿ ಕಾರ್ಯಕ್ರಮ ಅಭೂತಪೂರ್ವವಾಗಿ ಬಹು ವಿಜೃಂಭಣೆಯಿಂದ ನಡೆಯಿತು. ಉತ್ತರ ಭಾರತದ ಕಾಶಿ, ಹರಿದ್ವಾರ ಹಾಗೂ ಋಷಿಕೇಶದಲ್ಲಿ ಜರುಗುವ ಗಂಗಾರತಿ ಮಾದರಿಯಲ್ಲಿಯೇ ದಕ್ಷಿಣ ಭಾರತದಲ್ಲಿ ಚೊಚ್ಚಲ ತುಂಗಾರತಿ ತುಂಗಭದ್ರಾ ನದಿಗೆ ನಾಡಿನ ವಿವಿಧ ಮಠಾಧಿಶರು ಹಾಗೂ ಭಕ್ತರ ಸಮ್ಮುಖದಲ್ಲಿ ಸುಮಾರು ಒಂದು ಗಂಟೆ ಕಾಲ ಮಂತ್ರಘೋಷಗಳ ನಡುವೆ ನಡೆಯಿತು.