ತುಮಕೂರು: ಸಿದ್ದಗಂಗಾ ಮಠದ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ! - ಸಿದ್ದಗಂಗಾ ಮಠದ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ
🎬 Watch Now: Feature Video
ತುಮಕೂರಿನ ಸಿದ್ದಗಂಗಾ ಮಠದ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ ಎರಡು ಜಾನುವಾರುಗಳನ್ನು ಬಲಿ ತೆಗೆದುಕೊಂಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಮಠದ ಸಮೀಪ ಇರುವ ಬೆಟ್ಟಗುಡ್ಡಗಳಿಂದ ಬಂದಿರುವ ಚಿರತೆ ಮಠದ ಆವರಣದಲ್ಲಿರುವ ಕೊಟ್ಟಿಗೆಗೆ ನುಗ್ಗಿದೆ. ಜಾನುವಾರುಗಳ ವರ್ತನೆ ಕಂಡು ಸ್ಥಳಕ್ಕೆ ದೌಡಾಯಿಸಿದ ಮಠದ ಸಿಬ್ಬಂದಿಯನ್ನು ಕಂಡ ತಕ್ಷಣ ಚಿರತೆ ಅಲ್ಲಿಂದ ಪರಾರಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಬೋನನ್ನು ಇರಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.