ತುಮಕೂರು ಅಪಘಾತ: ಹಾಲುಣಿಸುವ ಸ್ಥಿತಿಯಲ್ಲೇ ಉಸಿರು ಬಿಟ್ಟಳು ಆ ತಾಯಿ - ‘ ಹಾಲುಣಿಸುವ ವೇಳೆ ಘಟನೆ
🎬 Watch Now: Feature Video
ತುಮಕೂರು: ಹಾಸನ- ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ಬ್ಯಾಲದಕೆರೆ ಗ್ರಾಮದ ಬಳಿ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, 13 ಮಂದಿ ಸಾವನಪ್ಪಿದ್ದಾರೆ. ಈ ಅಪಘಾತದಲ್ಲಿ ಹೃದಯವಿದ್ರಾವಕ ಘಟನೆಯೊಂದು ಜರುಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ 13 ಮಂದಿಯಲ್ಲಿ ತಾಯಿ ಮಗು ಕೂಡ ಇದ್ದು, 9ತಿಂಗಳ ಮಗುವಿಗೆ ತಾಯಿ ಹಾಲುಣಿಸುವ ವೇಳೆ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಮೃತ ದೇಹಗಳನ್ನು ತೆರವುಗೊಳಿಸುವ ವೇಳೆ ತಾಯಿ ಮಗುವಿಗೆ ಹಾಲುಣಿಸುವ ಸ್ಥಿತಿಯಲ್ಲಿ ಕಂಡು ಬಂದಿದ್ದು ಎಂತವರಿಗೂ ಮನಕಲುಕುಂತಿದೆ.
Last Updated : Mar 6, 2020, 12:11 PM IST