ಹಾಸನದಲ್ಲಿ ಗಾಳಿ-ಮಳೆಗೆ ನೆಲಕ್ಕುರುಳಿದ ಮರ: ಸಂಚಾರ ಅಸ್ತವ್ಯಸ್ತ - undefined
🎬 Watch Now: Feature Video

ಬಿಸಿಲ ಝಳಕ್ಕೆ ಕಾಯ್ದು ಕೆಂಡವಾಗಿದ್ದ ಹಾಸನ ಜಿಲ್ಲೆಗೆ ಸಂಜೆ ಸುರಿದ ಮಳೆ ತಂಪೆರೆದಿದೆ. ಜಿಲ್ಲಾಕೇಂದ್ರ ಸೇರಿದಂತೆ ಸಕಲೇಶಪುರ, ಶಾಂತಿಗ್ರಾಮ, ಸಕಲೇಶಪುರ, ಸೀಗೆ, ವೀರಾಪುರ, ಮೊಸಳೆಹೊಸಹಳ್ಳಿ, ಪುರದಮ್ಮ ವ್ಯಾಪ್ತಿಯಲ್ಲಿ ಜೋರಾಗಿ ಗಾಳಿ-ಮಳೆ ಆಗಿದೆ. ಆಲೂರು ತಾಲೂಕಿನ ಕಣತೂರು ಗ್ರಾಮದ ಸಮೀಪ ಗಾಳಿ ರಭಸಕ್ಕೆ ಮರವೊಂದು ರಸ್ತೆ ಮೇಲೆಯೇ ಉರುಳಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಮುಂಗಾರು ಪೂರ್ವದಲ್ಲಿ ಉತ್ತಮ ಮಳೆ ಬೀಳುತ್ತಿರುವುದರಿಂದ ವಾಣಿಜ್ಯ ಬೆಳೆಗಳಾದ ಆಲೂಗೆಡ್ಡೆ ಹಾಗೂ ಇತರೆ ಬೆಳೆಗಳ ಬಗ್ಗೆ ರೈತರಲ್ಲಿ ಆಶಾದಾಯಕ ಭಾವನೆ ಮೂಡಿದೆ.
Last Updated : May 7, 2019, 12:16 AM IST