ಈ ತರಬೇತಿ ವೈಖರಿಯಂತೆ.. ಮಕ್ಕಳಾದ್ರೇ ಮಾತ್ರ ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯ.. - Tumakuru
🎬 Watch Now: Feature Video
ತುಮಕೂರು : ಮಕ್ಕಳಿಗೆ ಕ್ರಿಯಾತ್ಮಕವಾಗಿ ಬೋಧನೆ ಮಾಡಲು ಸರ್ಕಾರ ಅನೇಕ ರೀತಿಯ ತರಬೇತಿಗಳನ್ನು ಶಿಕ್ಷಕರಿಗೆ ನೀಡುತ್ತಲೇ ಇರುತ್ತದೆ. ಅದರಲ್ಲೂ ಮಕ್ಕಳೊಂದಿಗೆ ಅವರ ಹವ್ಯಾಸಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಾಗ ಮಾತ್ರ ಶಿಕ್ಷಣದ ಗುಣಮಟ್ಟ ಉನ್ನತೀಕರಿಸಲು ಸಾಧ್ಯ. ಹೀಗಾಗಿ, ಶಿಕ್ಷಕರಿಗೆ ಹಲವು ತರಬೇತಿಗಳನ್ನು ನೀಡಲಾಗುತ್ತದೆ. ಅಂತಹ ತರಬೇತಿಯ ವಿಡಿಯೋ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಸರ್ಕಾರಿ ಶಾಲೆಯೊಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡುತ್ತಿರುವ ತರಬೇತಿಯ ವಿಡಿಯೋ ಇದಾಗಿದೆ.