ಎಸ್ಟಿ ಮೀಸಲಾತಿ ಹೋರಾಟ ಸಮಾರಂಭ: ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ - Bangalore International Exhibition Area
🎬 Watch Now: Feature Video
ನೆಲಮಂಗಲ: ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಮಿತಿಯ ಸಮಾರೋಪ ಸಮಾರಂಭ ಹಿನ್ನೆಲೆ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ನೈಸ್ ಜಂಕ್ಷನ್ ಬಳಿಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಸಮಾರಂಭ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ಕುರುಬ ಸಮುದಾಯದವರು ಬಂದಿದ್ದಾರೆ. ಸಮಾರಂಭ ನಡೆಯುತ್ತಿರುವ ಸಮಯದಲ್ಲಿಯೇ ಬಿಐಇಸಿಯಿಂದ ನೆಲಮಂಗಲದ ತನಕ ಟ್ರಾಫಿಕ್ ಜಾಮ್ ಆಗಿದೆ.