ಮೈಸೂರಿನಲ್ಲಿ ಮಾವುತರು ಮತ್ತು ಕಾವಾಡಿಗರಿಗೆ ಪಾರಂಪರಿಕ ಸನ್ಮಾನ.. - latest mysur news
🎬 Watch Now: Feature Video
ಇಂದು ಅರಮನೆಯ ಮುಂಭಾಗದ ಆನೆ ಟೆಂಟ್ನಲ್ಲಿ ದಸರಾ ಮಹೋತ್ಸವಕ್ಕೆ ಗಜಪಡೆಗಳೊಂದಿಗೆ ಆಗಮಿಸಿದ ಮಾವುತರು ಹಾಗೂ ಕಾವಾಡಿಗರಿಗೆ ಖಾಸಗಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್ ಮೈಸೂರು ಪೇಟಾ ಹಾಕಿ ಉಡುಗೊರೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಅಲೆಕ್ಸಾಂಡರ್, ಕಾಡಿನಿಂದ ಆನೆಗಳೊಂದಿಗೆ ಬಂದ ಮಾವುತರು ಮತ್ತು ಕಾವಾಡಿಗರಿಗೆ ಸನ್ಮಾನಿಸಿರೋದು ಸಂತೋಷ. ದಸರಾವನ್ನು ವಿಶ್ವದಾದ್ಯಂತ ತಲುಪಿಸುವ ಮುಖ್ಯ ರೂವಾರಿಗಳಿವರು. ಇವರನ್ನು ಗೌರವಿಸುವುದು ಸಂತೋಷಕರ ವಿಷಯವೆಂದರು.