ಟೊಮ್ಯಾಟೋ ಬೆಲೆ ಕುಸಿತ: ರಸ್ತೆಗೆ ಸುರಿದು ರೈತರ ಆಕ್ರೋಶ - Farmer outrage poured tomato into the road
🎬 Watch Now: Feature Video

ಕೊಪ್ಪಳ: ಟೊಮ್ಯಾಟೋ ಬೆಲೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡ ಹಿನ್ನೆಲೆ ರೈತರು ಟೊಮ್ಯಾಟೋ ಹಣ್ಣನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಶ್ಯಾಮೀದಲಿ ಸರ್ಕಲ್ನಲ್ಲಿ ರೈತರು ಟೊಮ್ಯಾಟೋ ಹಣ್ಣನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ತಾವರಗೇರಾ ಸುತ್ತಮುತ್ತಲಿನ ಗ್ರಾಮಗಳಿಂದ ರೈತರು ಮಾರುಕಟ್ಟೆಗೆ ಟೊಮ್ಯಾಟೋ ಹಣ್ಣನ್ನು ತಂದಿದ್ದರು. ಬೆಲೆ ಕುಸಿತದಿಂದ ಬೇಸರಗೊಂಡ ರೈತರು, ಮಾರುಕಟ್ಟೆಗೆ ತಂದಿದ್ದ ಟೊಮ್ಯಾಟೋ ಹಣ್ಣುಗಳನ್ನು ರಸ್ತೆಗೆ ಸುರಿದರು. ಕಳೆದ ವಾರ ಒಂದು ಬಾಕ್ಸ್ ಟೊಮ್ಯಾಟೋ ಹಣ್ಣು ಸುಮಾರು 200ರಿಂದ 250 ರೂಪಾಯಿಗೆ ಮಾರಾಟವಾಗಿತ್ತು. ಇಂದು ಒಂದು ಬಾಕ್ಸ್ ಟೊಮ್ಯಾಟೋ ಬೆಲೆ 50 ರೂಪಾಯಿ ಸಹ ಇಲ್ಲ. ದಲ್ಲಾಳಿಗಳು ಕಮಿಷನ್ ಸಹ ಹೆಚ್ಚಿಸಿದ್ದಾರೆ. ಕೇವಲ ರೈತರ ಬಗ್ಗೆ ಭಾಷಣ ಬಿಗಿಯುವುದಲ್ಲ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನೀಡಬೇಕು ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.