ಬನ್ನೇರುಘಟ್ಟ ಸಫಾರಿ ವೇಳೆ ಸಿಟ್ಟಿಗೆದ್ದ ಹುಲಿ ಮಾಡಿದ್ದೇನು ನೋಡಿ: ಹಳೆ ವಿಡಿಯೋ ವೈರಲ್ - Bannerghatta Biological Park
🎬 Watch Now: Feature Video
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆರು ತಿಂಗಳ ಹಿಂದೆ ಸದ್ದು ಮಾಡಿದ್ದ ಹುಲಿಯೊಂದರ ಆರ್ಭಟ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉದ್ಯಾನವನದಲ್ಲಿ ಓಡಾಡುವ ಸಫಾರಿ ವಾಹನದ ಹಿಂಬದಿಯ ಗಾರ್ಡನ್ನು ಹುಲಿಯು ತನ್ನ ಬಾಯಿಂದ ಕಚ್ಚಿ ಹಿಂದಕ್ಕೆ ಎಳೆಯುವ ದೃಶ್ಯ ಮತ್ತೊಂದು ಸಫಾರಿ ವಾಹನದಲ್ಲಿನ ವ್ಯಕ್ತಿಯೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿತ್ತು. ಈ ಕುರಿತು ಜೈವಿಕ ಉದ್ಯಾನದ ಅಧಿಕಾರಿಗಳಲ್ಲಿ ವಿಚಾರಿಸಿದಾಗ, ಇದು ತೀರಾ ಹಳೆಯ ವಿಡಿಯೋ. ಜನರು ಈಗ ವೈರಲ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.