ಒಲೆ ಹಚ್ಚುವಾಗ ಬಟ್ಟೆಗೆ ತಗುಲಿದ ಬೆಂಕಿ: ಪೊಲೀಸ್ ಪೇದೆ, ಪತ್ನಿ, ಪುತ್ರನ ಸ್ಥಿತಿ ಗಂಭೀರ!
🎬 Watch Now: Feature Video
ನೀರಿನ ಒಲೆ ಹಚ್ಚುವಾಗ ಸಂಭವಿಸಿದ ಅವಘಡದಿಂದ ಪೊಲೀಸ್ ಪೇದೆ, ಪತ್ನಿ ಹಾಗೂ ಪುತ್ರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನಲ್ಲಿ ನಡೆದಿದೆ. ಅಲ್ಲಿನ ಈಶ್ವರನಗರ ಬಡಾವಣೆಯ ನಿವಾಸಿ ಮುಖ್ಯ ಪೇದೆ ರೇಣುಕಾ ಸ್ವಾಮಿ ಮೈಸೂರಿನ ಸಿಎಆರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದು ರೇಣುಕಾ ಸ್ವಾಮಿ ಅವರ ಪತ್ನಿ ಒಲೆ ಹಚ್ಚುವಾಗ ಬೆಂಕಿಯ ಕಿಡಿ ಮೈ ಮೇಲೆ ಸಿಡಿದಿತ್ತು. ಈ ವೇಳೆ ಒಬ್ಬರಿಗೊಬ್ಬರು ಕಾಪಾಡುವ ಅವಸರದಲ್ಲಿ ಮೂವರಿಗೂ ಬೆಂಕಿ ತಗಲಿದೆ. ಅವಘಡದಲ್ಲಿ ಮುಖ್ಯ ಪೇದೆ ರೇಣುಕಾ ಸ್ವಾಮಿ (46), ಪತ್ನಿ ಪುಷ್ಪಲತಾ (35) ಹಾಗೂ ಪುತ್ರ ತೇಜಸ್ (14) ಗೆ ಗಂಭೀರ ಗಾಯಗಳಾಗಿವೆ. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕವಿದ್ದು ಇದೆ ಎನ್ನಲಾಗ್ತಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.