ಮೂರು ದಿನಗಳ ರಾಷ್ಟ್ರೀಯ ನೃತ್ಯಕಲಾ ಮಹೋತ್ಸವಕ್ಕೆ ಚಾಲನೆ - ಮೂರು ದಿನಗಳ ರಾಷ್ಟ್ರೀಯ ನೃತ್ಯಕಲಾ ಮಹೋತ್ಸವ
🎬 Watch Now: Feature Video

ತುಮಕೂರು: ಸಂಸ್ಕಾರ ಭಾರತಿ ವತಿಯಿಂದ ಪ್ರಾಂತ ರಾಷ್ಟ್ರೀಯ ನೃತ್ಯಕಲಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಉದ್ಘಾಟಿಸಿದರು. ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗದಿಂದ ಬಂದಿರುವ 28 ಕಲಾತಂಡಗಳು ಕುಚುಪುಡಿ, ಭರತನಾಟ್ಯ ಸೇರಿದಂತೆ ಹಲವು ರೀತಿಯ ಕಲೆಗಳನ್ನು ಪ್ರದರ್ಶಿಸಲಿವೆ.