ಬೆಂಕಿ ಬಿದ್ದು ಕೊಟ್ಟಿಗೆ ಭಸ್ಮ: ಕಟ್ಟಿದ ಸ್ಥಳದಲ್ಲೇ ಮೂರು ಹಸುಗಳು ಸಜೀವ ದಹನ - ಚಿಕ್ಕಮಗಳೂರು

🎬 Watch Now: Feature Video

thumbnail

By

Published : Jan 20, 2021, 12:02 PM IST

ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ತಗುಲಿ ದನದ ಕೊಟ್ಟಿಗೆ ಬೆಂಕಿಗಾಹುತಿ ಆಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಿಂದ ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳು ಸಜೀವ ದಹನವಾಗಿದ್ದು, ಅಜ್ಜಂಪುರ ತಾಲೂಕಿನ ಮುಗುಳಿ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಮಂಜಪ್ಪ ಎಂಬುವರಿಗೆ ಸೇರಿದ ಮೂರು ಹಸುಗಳು, ಸಂಪೂರ್ಣವಾಗಿ ಬೆಂಕಿಯಲ್ಲಿ ಬೆಂದಿದ್ದು, ಎರಡು ಹಸುಗಳನ್ನ ಸ್ಥಳೀಯರು ರಕ್ಷಿಸಿದ್ದಾರೆ. ಅಜ್ಜಂಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.