ಕೊರೊನಾ ಭೀತಿ ನಡುವೆ ದಾವಣಗೆರೆಯಲ್ಲಿ ಮತ್ತೊಂದು ಆತಂಕ! - Thousands of chickens have died at the KPM poultry farm
🎬 Watch Now: Feature Video
ದಾವಣಗೆರೆ: ಕೊರೊನೊ ವೈರಸ್ ಸೋಂಕು ಭೀತಿಯಲ್ಲಿರುವ ಬೆಣ್ಣೆನಗರಿಯ ಮಂದಿಗೆ ಮತ್ತೊಂದು ಆತಂಕ ಶುರುವಾಗಿದೆ. ತಾಲೂಕಿನ ಶಾಮನೂರಿನಲ್ಲಿರುವ ಕೆಪಿಎಂ ಕೋಳಿ ಫಾರಂನಲ್ಲಿ ಸಾವಿರಾರು ಕೋಳಿಗಳು ಏಕಾಏಕಿ ಸಾವನ್ನಪ್ಪಿವೆ. ಇಲ್ಲಿ ಸತ್ತ ಕೋಳಿಗಳನ್ನು ಅವೈಜ್ಞಾನಿಕವಾಗಿ ಸಮಾಧಿ ಮಾಡಿದ್ದು, ಹಕ್ಕಿಜ್ವರ ಭೀತಿಯಲ್ಲಿ ಜನರಿದ್ದಾರೆ. ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ದೃಢಪಟ್ಟರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಮಸ್ತಾನ್ ರೆಡ್ಡಿ ಕೋಳಿ ಫಾರಂನಲ್ಲಿ ಹೂತು ಹಾಕಿದ್ದ ಕೋಳಿಗಳನ್ನ ನಾಯಿಗಳು ಕೆದರಿ ತಿನ್ನುತ್ತಿವೆ. ಈ ಕುರಿತು ಈಟಿವಿ ಭಾರತಕ್ಕೆ ತಹಶೀಲ್ದಾರ್ ಸಂತೋಷ್ ಕುಮಾರ್ ಹಾಗೂ ಪಶುಸಂಗೋಪನೆ ಇಲಾಖೆ ಅಧಿಕಾರಿ ಜಗದೀಶ್ ಪ್ರತಿಕ್ರಿಯೆ ನೀಡಿದ್ದಾರೆ.
Last Updated : Mar 27, 2020, 8:53 PM IST
TAGGED:
Shamanur