ಹಗ್ಗ ಕಟ್ಟಿ ಹೊರಗೆಳೆದು ಸರಕು ಸಾಗಣೆ ವಾಹನದಲ್ಲಿ ಎಟಿಎಂ ಮೆಷಿನ್‌ ಕೊಂಡೊಯ್ದ ಕಳ್ಳರು! - Thieves who stole ATM machine

🎬 Watch Now: Feature Video

thumbnail

By

Published : Jan 19, 2021, 7:31 PM IST

ತುಮಕೂರು: ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಎಟಿಎಂ ಮಷಿನ್ ಕಳವು ಮಾಡಿದ್ದ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ಎಟಿಎಂ ಕೇಂದ್ರದೊಳಗೆ ನುಗ್ಗಿದ ದುಷ್ಕರ್ಮಿಗಳು ಮಷಿನ್​ಗೆ ಹಗ್ಗ ಕಟ್ಟಿ ಹೊರಗೆಳೆದಿದ್ದಾರೆ. ನಂತರ ಅದನ್ನು ಸರಕು ಸಾಗಣೆ ವಾಹನದಲ್ಲಿ ತುಂಬಿಸಿ ಕೊಂಡೊಯ್ದಿದ್ದಾರೆ. ಮೂವರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರನ್ನು ಪತ್ತೆ ಹಚ್ಚಲು ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.